text
stringlengths
30
70.8k
ಬಳಕೆದಾರರ ಆದ್ಯತೆಗಳ ಪ್ರಕಾರ ಆಯ್ಕೆಯ ವಿವಿಧ ಸಾಫ್ಟ್ವೇರ್ಗಳನ್ನು ಅಳವಡಿಸಬಹುದು ಮತ್ತು ಕಾರ್ಯಗತಗೊಳಿಸಬಹುದು. ಅದನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ, ವೆಬ್ ಮತ್ತು ವೇಗವನ್ನು ಸುಲಭವಾಗಿ ಕಂಪ್ಯೂಟಿಂಗ್ ಸಾಮರ್ಥ್ಯಕ್ಕಾಗಿ ಡೆವಲಪರ್ಗಳಿಗೆ ಸಹಾಯ ಮಾಡುತ್ತದೆ.
ಬೆಂಗಳೂರು: ಇಂದಿರಾ ಮೊಬೈಲ್‌ ಕ್ಯಾಂಟೀನ್‌ಗಳಿಗೆ ಇದೇ 26ರಂದು ವಿಧಾನಸೌಧದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಗ್ಗರಣೆ ಮಾತಿಗೆ ಕಿಟಾರನೆ ಕಿರುಚಿದ ಕಪ್ಪು ಮಗು ಬೆಳೆದು
16 ಕಟ್ಟುಗಳಲ್ಲಿ ಬಂದ 575 ಅರ್ಜಿಗಳು
ಕೆಲಕಾಲದ ನಂತರ ಲಸಿಕೆ ಈ ಕೆಟ್ಟ ಮಾರಿಯ ವಿರುದ್ಧ ಆಶಾದಾಯಕವಾಗಿ ಬಂದಿದೆ. ಒಬ್ಬರನ್ನೊಬ್ಬರು ನೋಡದ, ಮೈ ಮುಟ್ಟದ, ಹರಟೆ ಹೊಡೆಯದ, ಮಕ್ಕಳು ಕೆಮ್ಮದ, ಸೀನದ ಒಂಟಿ ಆರೋಗ್ಯಕರ ಪ್ರಪಂಚ ಮತ್ತು ಹೊರಗೆ ಹೋದ ತಕ್ಷಣ ಕೆಮ್ಮು, ಉಸಿರಾಟಕ್ಕೆ ತೊಂದರೆ, ಆಸ್ಪತ್ರೆ ಭರ್ತಿ, ಐಸಿಯು, ವೆಂಟಿಲೇಟರ ರೋಗಗ್ರಸ್ತ ಪ್ರಪಂಚಗಳೆಂಬ ಎರಡೇ ಎರಡರ ನಡುವ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆಯನ್ನು ನಮ್ಮಿಂದ ದೂರಮಾಡುವ ಆಶಾಕಿರಣವಾಗಿ ಬಂದಿದೆ.
‘ದೀಪಾವಳಿ ಹಬ್ಬದ ಅಂಗವಾಗಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ನಿಗದಿತ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸುವಂತೆ ನೋಡಿಕೊಳ್ಳುವುದು ಹಾಗೂ ನಿಷೇಧಿತ ಪಟಾಕಿ ಮಾರಾಟವನ್ನು ತಡೆಗಟ್ಟುವುದು ಪೋಲಿಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ತಪ್ಪಿದಲ್ಲಿ ಸಂಬಂಧಿಸಿದ ಠಾಣಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಗಾಬರಿ ಪಡುವಂತದ್ದು ಏನಿಲ್ಲವಾದರೂ, ಮೂರು ದಿನ ಆಸ್ಪತ್ರೆಯಲ್ಲೇ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅಷ್ಟಕ್ಕೂ ಯೋಗೀಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಕಾರಣ, ಅತಿಯಾದ ಸ್ಟ್ರೆಸ್.
ಲಸಿಕೆಗೆ ಹಾಕಲಾಗುತ್ತಿರುವ ತೆರಿಗೆಯನ್ನು ಕೂಡಲೇ ತೆಗೆದು ಹಾಕಬೇಕೆಂದು ಮಮತಾ ಬ್ಯಾನರ್ಜಿ ಅವರು ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಅದಕ್ಕೆ ಉತ್ತರವಾಗಿ ನಿರ್ಮಲಾ ಸೀತಾರಾಮನ್​ ಅವರು 16 ಟ್ವೀಟ್​ಗಳಲ್ಲಿ ಈ ಉತ್ತರ ನೀಡಿದ್ದಾರೆ. (ಏಜೆನ್ಸೀಸ್)
ಶ್ರೀಕಾಂತ್‌ ಮುಂಡೆ ಸಿ ಮಯಂಕ್‌ ಅಗರವಾಲ್‌ ಬಿ ಅಭಿಮನ್ಯು ಮಿಥುನ್‌ 01
ಅಧ್ವಾನಗೊಂಡ ರಸ್ತೆ, ಸಂಚಾರಕ್ಕೆ ಸಂಚಕಾರ
ಪಶುವೈದ್ಯ ಮೇಲೆ ಕಾಮುಕರು ಎಸಗಿದ ದುಷ್ಕೃತ್ಯಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಭಾರತೀಯ ಸಂವಿಧಾನದ ಐಪಿಸಿ ಸೆಕ್ಷನ್ 376ರ ಪ್ರಕಾರ ದಿಶಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
ಅಲ್ಲದೆ, ನಿಷೇಧಿತ ಪ್ರದೇಶದ ಹೊರಗಿನ 2 ಕಿ.ಮೀ. ವ್ಯಾಪ್ತಿಯನ್ನು ಬಫರ್‌ ಜೋನ್‌ ಎಂದು ಘೋಷಣೆ ಮಾಡಲಾಗಿದೆ. ಜತೆಗೆ ಗ್ರಾಮ ಮತ್ತು ಪಟ್ಟಣದ 3 ಕಿ.ಮೀ. ವ್ಯಾಪ್ತಿಯಲ್ಲಿಯಾವುದೇ ವ್ಯಕ್ತಿ, ಜನರು ಕಾಲ್ನಡಿಗೆ, ಇನ್ಯಾವುದೋ ವಾಹನಗಳ ಮೂಲಕ ಒಳ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ.
ಸಣ್ಣ ಕಾರು ನೋನೋ; ಎಸ್‌ಯುವಿ ಯಸ್‌ಯಸ್
ಮೋಹನ್ ಮತ್ತು ವಾಸಂತಿ ಕಾಡಿನ ಅಂಚಿನಲ್ಲಿ ಇರುವ ಮನೆಯಲ್ಲಿ ಇರುತ್ತಿದ್ದರು. ಅವರಿಗೆ ಸೊಗಸಾದ ಮಾವಿನ ಮರದ, ಬಾಲೆಯ ಗಿಡದ ತೋಟವಿದ್ದಿತು. ಕಷ್ಟಪಟ್ಟು ದುಡಿದು ಒಳ್ಳೆಯ ಕೆಲಸಮಾಡುತ್ತಿದ್ದರು. ಈ ವರ್ಷ ಮಳೆ ಚೆನ್ನಾಗಿ ಬಿದ್ದು ಒಳ್ಳೆ ಬೆಲೆ ಬಂದಿತ್ತು. ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಮೋಹನ್ ವಾಸಂತಿಗೆ ‘ಬೆಳೆ ಮಾರಿದರೆ ಬೇಕಾದಷ್ಟು ಹಣ ಬರ‌್ತದೆ.
ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಆಕ್ಲೆಂಡ್‌ನಿಂದ ಹ್ಯಾಮಿಲ್ಟನ್‌ಗೆ ತೆರಳುವ ವೇಳೆ, ಬಿಸಿಸಿಐನ ‘ಚಾಹಲ್‌ ಟಿವಿ’ಯಲ್ಲಿ ಚಾಹಲ್‌ ಈ ರೀತಿ ಹೇಳಿದ್ದಾರೆ.
ಉಪ್ಪೂರಿನ ನರ್ನಾಡು ನಿವಾಸಿ ಗೋಪಾಲಕೃಷ್ಣ ಮಡಿವಾಳ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಬಳಿಕ ನಕ್ಸಲರು ಸುರೇಶ್‌ ಅವರ ಮನೆಯಲ್ಲಿ ಊಟ ಮಾಡಿ ಹೋಗಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ. ಮೂರೂ ಮನೆಗಳಿಂದ ಅಕ್ಕಿ, ಸಕ್ಕರೆ, ತರಕಾರಿ, ನೀರುಳ್ಳಿ ಮುಂತಾದ ತಮ್ಮ ಅಗತ್ಯದ ಸಾಮಗ್ರಿಗಳನ್ನು ಕೇಳಿ ಪಡೆದು ರಾತ್ರಿ ವೇಳೆ ಕಾಡಿನತ್ತ ಮರಳಿದರು ಅನ್ನುವ ಮಾಹಿತಿಯೂ ತಿಳಿದು ಬಂದಿದೆ.
ಈ ವರ್ಗದ ಜನರ ಬಳಿ ಆಸ್ತಿಯೇ ಇಲ್ಲದಿರುವುದರಿಂದ, ಇವರು ಸಾಲ ಮಾಡುವುದು ಕಡಿಮೆ. ಯಾವ ಬ್ಯಾಂಕ್ ತಾನೆ ಇವರಿಗೆ ಸಾಲ ಕೊಡುತ್ತದೆ? ಇನ್ನೊಬ್ಬರ ಜಮೀನಿನಲ್ಲಿ ಕೂಲಿ ಆಳುಗಳಾಗಿ ದುಡಿಯುವವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು, ಆ ಜಮೀನುಗಳ ಮಾಲೀಕರ ಸಾಲ ಮನ್ನಾಗೆ ಬಳಸಿದ್ದು ಯಾವ ನ್ಯಾಯ?
ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ
ಬಾಲಿವುಡ್ ಬಳುಕುವ ಬಳ್ಳಿ ಬಿಪಾಶಾ ಬಸು ಯೋಗ ಭಂಗಿ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದರಲ್ಲೂ ಅಭಿಮಾನಿಗಳು ಬಿಪಾಶಾರ ಭಂಗಿ ನೋಡಿ ಕಂಗಾಲಾಗಿದ್ದಾರೆ. ಇದ್ಯಾವ ರೀತಿಯ ಯೋಗ ಅಂತ ತಲೆಕೆಡಿಸಿಕೊಳ್ಳುವಂತಾಗಿದೆ.
ಫೈಬ್ರಾಯ್ಡ್ಗಳ ಪಿಟಜಿಕ್ ಅಂಗಾಂಶಗಳನ್ನು ನಾಶಮಾಡುವ ಇತರ ಮಾರ್ಗಗಳಿವೆ:
ವಿಜಯಪುರ: ‘ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಎಲ್ಲ ಯೋಜನೆಗಳು ನಿರ್ಣಾಯಕ ಘಟ್ಟ ತಲುಪಿದೆ. ಇನ್ನು 2–3 ವರ್ಷಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ವಿಶಾಲವಾದ ಅಡಿಗೆಮನೆಗಳಿಗೆ ಓವಲ್ ಕೋಷ್ಟಕಗಳು ಹೆಚ್ಚು ಸೂಕ್ತವಾಗಿವೆ. ಈ ಅಂಡಾಕಾರದ ರಚನೆಯು ಹೆಚ್ಚಿನ ಸಂಖ್ಯೆಯ ಅತಿಥಿಗಳು ಹೋಲಿಸಬಹುದು, ಉದಾಹರಣೆಗೆ, ಒಂದು ಆಯತಾಕಾರದ ಒಂದು. ಜೊತೆಗೆ, ಮೂಲೆ ಕೋಷ್ಟಕಗಳು, ಮೂಲೆಗಳ ಅನುಪಸ್ಥಿತಿಯಿಂದಾಗಿ, ಚಿಕ್ಕ ಮಕ್ಕಳೊಂದಿಗೆ ಕುಟುಂಬಗಳಿಗೆ ಸುರಕ್ಷಿತ ಮತ್ತು ಅನುಕೂಲಕರವಾಗಿರುತ್ತದೆ.
4) ತಡೆಗಟ್ಟುವಿಕೆ ಡಿಸೀಸಸ್: Argan ತೈಲ ಇದು ತಿನ್ನಲು ನಿಯಮಿತವಾಗಿ ಸೂಚಿಸಲಾಗುತ್ತದೆ ಆದ್ದರಿಂದ, ಏಕಾಪರ್ಯಾಪ್ತ ಮತ್ತು ಅಪರ್ಯಾಪ್ತ ಕೊಬ್ಬಿನ ಆಮ್ಲಗಳ ಬಹಳಷ್ಟು ಹೊಂದಿದೆ. ಆದ್ದರಿಂದ ನೀವು ಹೃದಯ ಕಾಯಿಲೆ ಮತ್ತು ಸಂಧಿವಾತ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ, ಮೆದುಳಿನ ರಕ್ತದ ಹರಿವು, ಜೀರ್ಣಾಂಗ ಮತ್ತು ಯಕೃತ್ತು ಒಂದು ಸ್ಥಿತಿ ಸುಧಾರಿಸಲು.
ಆಗಾಗ್ಗೆ ಎಕ್ಸ್-ರೇ ವಿಕಿರಣದಿಂದ ಪ್ರೇರೇಪಿಸಲ್ಪಟ್ಟ ರೋಗಶಾಸ್ತ್ರೀಯ ರೋಗವು ಹರಡುತ್ತದೆ. ಮಾನವ ದೇಹದ ಮೇಲೆ ಅಂತಹ ಒಂದು ಪರಿಣಾಮವೆಂದರೆ ಹೃದಯ ಅಂಗಾಂಶದ ಸಾಮಾನ್ಯ ಕೋಶಗಳ ಸಾವು ಸೇರಿದಂತೆ ಹಲವಾರು ರೋಗಶಾಸ್ತ್ರೀಯ ಪ್ರಕ್ರಿಯೆಗಳಿಗೆ ಕಾರಣವಾಗುತ್ತದೆ.
ಪ್ರವಾಸೋದ್ಯಮ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಜವಾಬ್ದಾರಿ ವಹಿಸಿತ್ತು. ಆದರೆ, ಕಾಮಗಾರಿ ಪ್ರಗತಿ ತೋರಿಸದ ಹಿನ್ನೆಲೆಯಲ್ಲಿ ನಬಾರ್ಡ್ ನೀಡಿದ್ದ ಹಣ ಭರವಸೆ ಪತ್ರದ 18 ತಿಂಗಳ ಅವಧಿ ಮುಗಿದು ಹೋಗಿದೆ. ಈಗ ಮತ್ತೆ ಹಣ ನೀಡುವಂತೆ ಮರು ಅರ್ಜಿ ಸಲ್ಲಿಸಲಾಗಿದ್ದು, ಹಣ ಬಿಡುಗಡೆಗೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಮಹೇಂದ್ರ ಸಿಂಗ್ ದೋನಿ ಬಳಗ ಅಕ್ಟೋಬರ್‌ 16ರಂದು ಧರ್ಮಶಾಲದಲ್ಲಿ ಮೊದಲ ಪಂದ್ಯ ಆಡಲಿದೆ. ಎರಡನೇ ಮತ್ತು ಮೂರನೇ ಪಂದ್ಯ ಕ್ರಮವಾಗಿ ಮೊಹಾಲಿ (ಅ. 23) ಮತ್ತು ರಾಂಚಿಯಲ್ಲಿ (ಅ.26) ನಿಗದಿಯಾಗಿವೆ.
ಸ್ವಾತಂತ್ಯೋತ್ಸವ: ಸ್ವಾತಂತ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫ‌ಲಪುಷ್ಪ ಪ್ರದರ್ಶನ ನಡೆಯುತ್ತದೆ. ಮೈಸೂರು ಉದ್ಯಾನಕಲಾ ಸಂಘವು ತೋಟಗಾ­ರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸುವ ಫ‌ಲಪುಷ್ಪ ಪ್ರದರ್ಶನ ರಾಜಧಾನಿಯಲ್ಲಿ ಅತ್ಯಂತ ಜನಪ್ರಿಯ ಪಡೆದಿದೆ.
ಇದರಲ್ಲಿ ಕೇಂದ್ರ ಕಾರಾಗೃಹದ 40 ಮತ್ತು ವಿಶೇಷ ಕಾರಾಗೃಹದ 45 ಕೈದಿಗಳು ಸೇರಿದ್ದಾರೆ ಎಂದು ನಾಗಾಂವ್‌ನ ಬಿ.ಪಿ ಸಿವಿಲ್‌ ಆಸ್ಪತ್ರೆಯ ಮೇಲ್ವಿಚಾರಕರಾದ ಡಾ. ಎಲ್‌.ಸಿ.ನಾಥ್‌ ಮಾಹಿತಿ ನೀಡಿದ್ದಾರೆ.
ಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ.
ಆಕ್ರಮಣಕಾರಿ ಕುಸ್ತಿಪಟು ಆಗಿರುವ ನಾಗರಾಜ ಲೆಗ್ ಅಟ್ಯಾಕ್‌ ತಂತ್ರವನ್ನು ಹೆಚ್ಚಾಗಿ ಬಳಸುತ್ತಾರೆ. ‘ಸಣ್ಣವನಿದ್ದಾಗ ನೋಡಿದ ಕುಸ್ತಿಯಲ್ಲೆಲ್ಲ ಈ ತಂತ್ರವೇ ನನ್ನನ್ನು ಹೆಚ್ಚು ಸೆಳೆಯುತ್ತಿತ್ತು. ಅದನ್ನೇ ನನ್ನ ಮುಖ್ಯ ಅಸ್ತ್ರವಾಗಿ ಬಳಸಿಕೊಂಡೆ’ ಎಂದು ಹೇಳುವ ಈ 21ರ ಹರೆಯದ ಅಪ್ಪಟ ಗ್ರಾಮೀಣ ಪ್ರತಿಭೆಗೆ ಅಂತರರಾಷ್ಟ್ರೀಯ ಕುಸ್ತಿಪಟುಗಳಾದ ಸುಶೀಲ್‌ ಕುಮಾರ್‌ ಮತ್ತು ಯೋಗೇಶ್ವರ ದತ್‌ ಅವರಂತೆ ಆಗುವ, ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ.
ಸ್ವಂತ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ
ಗ್ರಾಮದಲ್ಲಿ ನಾಲ್ಕು ಸಾವಿರ ಜನಸಂಖ್ಯೆ ಇದೆ. ಎರಡು ಹ್ಯಾಂಡ್‌ಪಂಪ್‌ ಮತ್ತು ಎರಡು ಬಾವಿಗಳಿವೆ. ಆದರೂ, ಅವುಗಳಿಂದ ಹೆಚ್ಚಿನ ನೀರು ದೊರೆಯುತ್ತಿಲ್ಲ. ಜನ ನೀರಿಗಾಗಿ ನಿತ್ಯ ಕಷ್ಟಪಡುವ ಸ್ಥಿತಿ ಎದುರಾಗಿದೆ. ದಿನ ಬೆಳಗಾದರೆ ಎಲ್ಲರೂ ಬಿಸಿಲಿನ ತಾಪ ಲೆಕ್ಕಿಸದೆ ಹೊಲಹೊಲ ಅಲೆದಾಡುತ್ತಿದ್ದಾರೆ. ಆದರೂ, ಕೊಡ ನೀರು ಸಿಗುವುದಿಲ್ಲ. ಇನ್ನೂ ಜಾನುವಾರುಗಳಿಗೆ ನೀರುಣಿಸುವುದಂತೂ ದೊಡ್ಡ ಸವಾಲಾಗಿದೆ. ಹಾಗಾಗಿ, ಕೆಲವರು ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನೋವಿನಿಂದ ನುಡಿಯುತ್ತಾರೆ ರಾಜಕುಮಾರ, ರವಿ ಮಹಾಗಾವೆ.
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆ ಮೇಲಿಂದ ಶುಕ್ರವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಗೂಡಿನಬಳಿ ನಿವಾಸಿ ಜೀವ ರಕ್ಷಕ ಹಾಗೂ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ( HRS) ನ ಬಂಟ್ವಾಳ ತಾಲೂಕಿನ ಗ್ರೂಪ್ ಲೀಡರ್ ಸತ್ತಾರ್ ಗೂಡಿನಬಳಿ ಹಾಗೂ ಸ್ವಾದಿಕ್ ಎಂ. ಕೆ. ಎಂಬವರು ನದಿಗೆ ಧುಮುಕಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶೀಯ ಜವಾರಿ ಆಕಳಿನ ಸೆಗಣಿಯಿಂದ ಭಸ್ಮ ತಯಾರಿಸುವುದು ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಹಾಗೂ ಬಾಗಲಕೋಟೆ ಸಮೀಪದ ಮುಚಖಂಡಿಯ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರದಲ್ಲಿ ಮಾತ್ರ. ಈಚೆಗೆ ವಿಜಯಪುರದ ಕಗ್ಗೋಡದ ಯತ್ನಾಳರ ಗೋವು ಶಾಲೆಯಲ್ಲೂ ತಯಾರಿಸಲಾಗುತ್ತಿದೆ. ಕ್ರಿಯಾ ಭಸ್ಮವನ್ನು ಮಾತ್ರ, ಮುಚಖಂಡಿ ಮತ್ತು ಶಿವಯೋಗ ಮಂದಿರದಲ್ಲಷ್ಟೇ ಉತ್ಪಾದಿಸಲಾಗುತ್ತಿದೆ.
ಹೊಟೇಲ್‌ ಸೆರಾಯ್‌ನಲ್ಲಿ ಬುಧವಾರ ನಡೆದ ಚಿಕ್ಕಮಗಳೂರು ಅಡ್ವೆಂಚರ್‌ಸ್ಪೋರ್ಟ್ಸ್ಕ್ಲಬ್‌ನ 2016-17 ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಂಜೆಲೊ ಮ್ಯಾಥ್ಯೂಸ್ ಮುನ್ನಡೆಸುತ್ತಿರುವ ಪುಣೆ ವಾರಿಯರ್ಸ್ ಕೂಡಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಟೂರ್ನಿಯ ಆರಂಭಕ್ಕೆ ಮುನ್ನವೇ ಪುಣೆ ಆಘಾತ ಅನುಭವಿಸಿತ್ತು. ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಐಪಿಎಲ್‌ನಿಂದ ಹಿಂದೆ ಸರಿದದ್ದೇ ಇದಕ್ಕೆ ಕಾರಣ. ಬೆನ್ನು ನೋವಿನಿಂದ ಬಳಲುತ್ತಿರುವ ಕ್ಲಾರ್ಕ್ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
ಮೈಸೂರು: ಕಾಡಾನೆಗೆ ಹೆದರಿ ಮರದ ಮೇಲೆ ಮನೆ ಮಾಡಿದ ಮಹಿಳೆ
ಕಳೆದ ವರ್ಷ ಹೀಗೇ ಒತ್ತಾಯ ಹೆಚ್ಚಾಗಿ, ಬೇತಾಳ ಹೆಗಲಿಗೇರಿಸಿ, ಸ್ಸಾರಿ, ಬ್ಯಾಗ್ ಹೆಗಲಿಗೇರಿಸಿ, ಮನೆಯವರೊಂದಿಗೆ ಮಂಗಳೂರಿನ ಹತ್ತಿರದ ಹಳ್ಳಿಗೆ ಹೋಗಿದ್ದೆ.
ಬೆಂಗಳೂರು: ನಾನೇನು ಯಾವುದೇ ಚೆಕ್ ನಲ್ಲಿ ತೆಗೆದುಕೊಂಡಿಲ್ಲ. ಆಗಲೇ ಯಡಿಯೂರಪ್ಪಗೆ ಕನಸು ಬೀಳುತ್ತಿದೆ ಬೇಕಾದರೆ ಎಸಿಬಿಗೆ ದೂರು ಕೊಡಲಿ ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಂದರ್ಶಿನಿ ಹೋಟೆಲ್‌ ಸುಮಾರು 52 ವರ್ಷ ಹಳೆಯದು. ನಾವು ಯಾವುದೇ ತಿಂಡಿ ಊಟದ ಬೆಲೆ ಏರಿಸಿಲ್ಲ. ಇಡ್ಲಿವಡೆ 35-40, ದೋಸೆ 40, ಊಟ 60-70 ಇದೆ. ಆದರೂ, ಜನ ಮೊದಲಿನಂತೆ ಬರುತ್ತಿಲ್ಲ. ಎಷ್ಟು ಮಾಡಬೇಕು, ಏನು ಮಾಡಬೇಕು ಎನ್ನುವ ಅಂದಾಜು ನಮಗೆ ತಿಳಿಯುತ್ತಿಲ್ಲ. ಇನ್ನು ಕೆಲಸಗಾರರನ್ನು ಇಟ್ಟುಕೊಳ್ಳುವುದೇ ನಮಗೆ ದೊಡ್ಡ ತಲೆನೋವಾಗಿದೆ. ಶೇ.40 ಮಾತ್ರ ವ್ಯಾಪಾರವಾಗುತ್ತಿದೆ.
ಈ ನಡುವೆ ಮೂವರು ನಕಲಿ ವರದಿ ತಂದಿರುವುದನ್ನು ರಾಜ್ಯದ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅಧಿಕಾರಿ ಮಂಜುನಾಥ್ ಹಾಗೂ ಆರೋಗ್ಯ ಇಲಾಖೆ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ
ಜನವರಿ ಎರಡನೇ ಶನಿವಾರ ಸಾಂಪ್ರದಾಯಿಕ ಥಾಯ್ ರಜಾ ಆಚರಿಸುತ್ತದೆ - ಮಕ್ಕಳ ದಿನ. ಅವರು ಸಾಮಾನ್ಯವಾಗಿ ಮಕ್ಕಳು ಮತ್ತು ವಯಸ್ಕರು, ವರ್ಣರಂಜಿತ ಪ್ರದರ್ಶನಗಳು ಮತ್ತು ಉತ್ಸವಗಳ ಮನರಂಜನೆಯ ಇರುತ್ತದೆ.
“ಲಾಕ್‌ಡೌನ್ ಅನ್ನು ಕಾರ್ಯಗತಗೊಳಿಸಲು ದೆಹಲಿ ಸರ್ಕಾರವು ಅಗತ್ಯವಿರುವ ಎಲ್ಲಾ ಅಧಿಕಾರಗಳನ್ನು ಹೊಂದಿದೆ” ಎಂದು ಅಧಿಕಾರಿ ಹೇಳಿದ್ದಾರೆ. ಕೇಜ್ರಿವಾಲ್ ಸರ್ಕಾರದ ಅಧಿಕಾರಗಳ ಬಗ್ಗೆ ಸ್ಪಷ್ಟವಾದ ಉಲ್ಲೇಖವು ರಾಷ್ಟ್ರೀಯ ರಾಜಧಾನಿಯಲ್ಲಿ ವ್ಯವಹಾರಗಳನ್ನು ನಡೆಸಲು ಹಾಗೂ ಅಧಿಕಾರ ವಿತರಣೆಯ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ದೀರ್ಘಕಾಲದವರೆಗೆ ನಡೆದ ಸಂಘರ್ಷವನ್ನು ಇದು ಸೂಚಿಸುತ್ತದೆ.
ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಅಜೀಜ್ ಅವರು ಮುಂಬೈಗೆ ಆಗಮಿಸಿದ್ದರು. ಮುಂಬೈ ಏರ್ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಅವರ ಆರೋಗ್ಯ ಏರುಪೇರಾಯಿತು. ಕ್ಯಾಬ್ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಯಾಕೋ ಆರೋಗ್ಯ ಸರಿಯಾಗಿಲ್ಲ ಎಂದು ಡ್ರೈವರ್ ಗೆ ಹೇಳಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದಿರುವ ಹರಿಯಾಣದ ಚೆಲುವೆ ಮಾನುಷಿ ಚಿಲ್ಲರ್ ಸಾಕಷ್ಟು ಸುದ್ದಿ ಮಾಡ್ತಿದ್ದಾರೆ. ಮಾನುಷಿ ಬಾಲಿವುಡ್ ಎಂಟ್ರಿ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಮೊದಲ ಬಾರಿ ಮಾಧ್ಯಮದವರೊಂದಿಗೆ ಮಾತನಾಡಿದ Read more…
2018ರಲ್ಲಿ ಸ್ವಿಸ್‌ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಜಗತ್ತಿನ ಅತ್ಯಂತ ಹೆಚ್ಚು ವಾಯು ಮಾಲಿನ್ಯ ನಗರಗಳಲ್ಲಿ ಭಾರತದ ಗುರುಗ್ರಾಮ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಾಜಿಯಾಬಾದ್‌ ಇದ್ದರೆ ಪಾಕಿಸ್ಥಾನದ ಫೈಸಲಾಬಾದ್‌ ಮೂರನೇ ಸ್ಥಾನದಲ್ಲಿದೆ. ದಿಲ್ಲಿಗೆ ಈ ಪಟ್ಟಿಯಲ್ಲಿ 11ನೇ ಸ್ಥಾನ. ಆದರೆ, ಗರಿಷ್ಠ ಮಾಲಿನ್ಯವಾದ ರಾಜಧಾನಿ ಎಂಬ ಹಣೆಪಟ್ಟಿ ಕಳವಳಕಾರಿ.
ಹೌದು, 2005 ರ ಸಮಯದಲ್ಲಿ ನಿರ್ದೇಶಕ ರಘುರಾಮ್​ಗೆ ಕಿಚ್ಚ ಸುದೀಪ್​ ಫೋನ್​ವೊಂದನ್ನು ಕೊಡಿಸಿದ್ದರು. ಅದುವೇ ನೊಕಿಯಾ ಕಮ್ಯೂನಿಕೇಟರ್ ಹ್ಯಾಂಡ್​ಸೆಟ್​. ಆವತ್ತು ಕೊಡಿಸಿದ್ದ ಆ ಫೋನಿನ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡ ರಘುರಾಮ್​, ‘ಜಮಾನದಲ್ಲೇ ಉಡುಗೊರೆಯಾಗಿ ಕೊಟ್ಟು ಕಾಸ್ಟ್ಲಿ ಫೋನ್ನನ್ನ.. ಪ್ರತಿಯೊಬ್ಬ ಸ್ನೇಹಿತರಿಗೂ ಹೇಳಿಕೊಟ್ಟರು ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ ಅನ್ನೋದನ್ನ.. 15 ವರ್ಷದ ಹಿಂದೆ ಕಿಚ್ಚ ಸುದೀಪ್ ಸರ್ ನೀಡಿದ ಕಾಣಿಕೆ..’ ಎಂದು ರಘುರಾಮ್​ ಬರೆದುಕೊಂಡಿದ್ದಾರೆ.
ಬೆಂಗಳೂರು: ಮನೀಷ್ ಪಾಂಡೆ ನಾಯಕತ್ವದಲ್ಲಿ ಕರ್ನಾಟಕ ತಂಡ ನಾಲ್ಕನೆ ಬಾರಿಗೆ ವಿಜಯ್​ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಏಪ್ರಿಲ್‌ 23ನೇ ದಿನಾಂಕವನ್ನು 'ವಿಶ್ವ ಪುಸ್ತಕ ದಿನ'ವೆಂದು ವಿಶ್ವಸಂಸ್ಥೆ ಸೂಚಿಸಿದೆ. ಇದನ್ನು ಆಚರಿಸುವವರು ಅಷ್ಟಾಗಿ ಗಮನಿಸದ ಇನ್ನೊಂದು ವಿಷಯವೆಂದರೆ ಇದು ' ವಿಶ್ವ ಪುಸ್ತಕ ದಿನ ಮತ್ತು ಕಾಪಿರೈಟ್‌ ದಿನ' ಕೂಡ. ಪುಸ್ತಕಗಳಿಗೆ ಒತ್ತು ನೀಡಿದ ಮಂದಿ ಕಾಪಿರೈಟ್‌ಗೆ ಅಷ್ಟೇನೂ ಗಮನ ಕೊಟ್ಟಂತಿಲ್ಲ. ಕೇರಳದಲ್ಲಿ ಒಂದು ವಿಶಿಷ್ಟ ರೂಢಿಯಿದೆ. ಇಂಗ್ಲಿಷ್‌ನಲ್ಲಿ ಯಾವುದೇ ಲೇಖಕ ಜನಪ್ರಿಯನಾಗಲಿ, ಆತನ ಬರಹಗಳನ್ನು ಒಪ್ಪಿಗೆ, ಪರವಾನಗಿಯ ಹಂಗಿಲ್ಲದೆ ಅನುವಾದಿಸಿ ಓದಿ ಖುಷಿಪಡುತ್ತಾರೆ; ಇದು ತುಂಬಾ ಕಾಸು ಕುಣಿಯುವ ವ್ಯಾಪಾರಿ ಚಟುವಟಿಕೆಯೇನೂ ಅಲ್ಲ. ಹಾಗಾಗಿ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೊಸ ತಲೆಮಾರು ಕೂಡ 'ಕಾಪಿರೈಟ್‌'ನ ಬಗ್ಗೆ ಚಿಂತಿಸುವುದಕ್ಕಿಂತಲೂ ಹೆಚ್ಚಾಗಿ 'ಕಾಪಿಲೆಫ್ಟ್‌'ನ ಬಗ್ಗೆಯೇ ಯೋಚಿಸುತ್ತದೆ. ಅಂದರೆ, ಬೌದ್ಧಿಕ ಆಸ್ತಿ ಹಕ್ಕು ಎಂಬುದು ನಿಮ್ಮ ಶಾಶ್ವತ ದರ್ಖಾಸ್ತೇನೂ ಅಲ್ಲ; ಒಮ್ಮೆ ಅದನ್ನು ಸಾರ್ವಜನಿಕ ಬಳಕೆಗೆ ನೀಡಿದ ಬಳಿಕ ಅದರ ಹಕ್ಕನ್ನು ನೀವು ಕ್ಲೇಮ್‌ ಮಾಡುವುದು ನೈತಿಕವಾಗಿ ಸರಿಯಲ್ಲ ಎಂಬ ವಾದ ಅದು. ಇರಲಿ.
ಸಾತ್ರಾಗಾಚ್‌ ಜಂಕ್ಷನ್‌ನಿಂದ ಗುರುವಾರ ಸಂಜೆ 4.05ಕ್ಕೆ ಹೊರಡುವ ರೈಲು ಇದೇ ಮಾರ್ಗವಾಗಿ ತಿರುಪತಿಗೆ ಬರುವಾಗ ಶುಕ್ರವಾರ ಸಂಜೆ 5.10 ಗಂಟೆ ಆಗುತ್ತದೆ. ಶನಿವಾರ ಬೆಳಗ್ಗೆ 9.45ಕ್ಕೆ ರೈಲು ಮಂಗಳೂರು ಸೆಂಟ್ರಲ್‌ಗೆ ತಲುಪುತ್ತದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಸಕ್ತ ಕೋವಿಡ್ ಆಸ್ಪತ್ರೆಯಲ್ಲಿ 41 ಮಂದಿ ದಾಖಲಾಗಿದ್ದಾರೆ. ಇವರೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 214ಮಂದಿ ಪ್ರಯೋಗಾಲಯದ ವರದಿಯ ನಿರೀಕ್ಷೆಯಲ್ಲಿದ್ದಾರೆ.
ಕೇಂದ್ರ ರಾಜ್ಯ ಸರ್ಕಾರಗಳಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತಿಲ್ಲ. ವಲಸೆ ಕಾರ್ಮಿಕರನ್ನು ತತ್ತರಿಸಿದೆ ಎಂದು ಆರೋಪಿಸಿದರು. ಲಾಕ್ ಡೌನ್ ಪ್ರಾರಂಭವಾದಾಗಿನಿಂದ (ಮಾರ್ಚ್ 25 ರಂದು) ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ಕನಿಷ್ಠ 15 ಬಾರಿ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿಯ ವಿನಯ್ ಸಹಸ್ರಬುದ್ಧೆ ಹೇಳಿದರು. “ಆದರೆ ಯಾವುದೇ ಮುಖ್ಯಮಂತ್ರಿಗಳು ಲಾಕ್ಡೌನ್ ಅನ್ನು ವಿಧಿಸಬಾರದು ಎಂದು ಹೇಳಿಲ್ಲ.”
ಬಂಟ್ವಾಳ: ಕಳೆದ ಸೆ.26ರಂದು ತಾಲೂಕಿನ ಬಾಳೆಪುಣಿ ಗ್ರಾಮದ ಬೆಳ್ಳೇರಿಯ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಸಂದರ್ಭ ಬಂಧಿತ ಆರೋಪಿ ಚಿನ್ನಾಭರಣ ದೋಚಲು ಬಂದು ಅತ್ಯಾಚಾರ ಗೈದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸ್ವಚ್ಛ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ವಿದ್ಯಾರ್ಥಿಗಳು ಕೈ ಜೋಡಿಸಿ: ಸಾಲಿಯಾನ್
ಕೆಲವೊಮ್ಮೆ ಅಹಿತಕರ ಅಡ್ಡ ಹೆಸರುಗಳು ಒಂದು ಹೆಸರಿನ ಗ್ರಹಿಕೆಗೆ ಸಂಬಂಧಿಸಿವೆ. ಸ್ಟಯಾಸ್, ಎಡಿಕ್, ಸೆರ್ಗೆಯ್ ಎಂಬ ಹೆಸರಿನ ಹುಡುಗರಿಗೆ ಪ್ರಾಸವಾಗಿ ಕರೆಯಲ್ಪಡುವ ಹುಡುಗರಿಗೆ ಇದು ಸುಲಭವಲ್ಲ, ಆದ್ದರಿಂದ ಅವುಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲು ಕಲಿಸಬೇಕಾಗಿರುವುದು: ಸ್ಟಾನಿಸ್ಲಾವ್, ಎಡ್ವರ್ಡ್, ಸೆರಿಯೋಝಾ.
ಟಾಸ್ ಗೆದ್ದಿದ್ದು ಶ್ರೀಲಂಕಾ ಆದರೆ ಘೋಷಿಸಿದ್ದು ಟೀಂ ಇಂಡಿಯಾ ಹೆಸರು!
ಸಮಾರಂಭದಲ್ಲಿ ಕಥಾ ಸಂಕಲನ ವಾತ್ಸಲ್ಯ ಸಿಂಧು ಕೃತಿಯ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಹಾಗೂ ಕವನ ಸಂಕಲನ ಸುಪ್ತ ಸಿಂಚನ ಕೃತಿಯ ಬಗ್ಗೆ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕೃತಿಪರಿಚಯ ನೀಡಿ ಮಾತನಾಡಿದರು.
ನಿಮ್ಮ ಪ್ರಚಾರ ಮಿಶ್ರಣವನ್ನು ನಿರ್ಧರಿಸುವುದು
ಯಾವುದೇ ಕಾರಣವಿರಲಿ. ಈ ಅಸಂಬದ್ಧ, ಅತಾರ್ಕಿಕ ಜಾತಿಪೂರ್ವಗ್ರಹದ ಪ್ರತೀಕವಾಗಿರುವ ಶೇ. 50ರ ಮೀಸಲಾತಿ ಮೇಲ್ಮಿತಿ ತೊಲಗಲೇ ಬೇಕು. ಆದರೆ ಅದರಾಚೆಗೂ ಅಸಲೀ ಪ್ರಶ್ನೆಯೊಂದು ಹಾಗೆ ಉಳಿಯುತ್ತದೆ. ಮೀಸಲಾತಿ ಹೆಚ್ಚಿಸಿದ ಮಾತ್ರಕ್ಕೆ ಇಂದಿನ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶಿಕ್ಷಣ ಮತ್ತು ಉದ್ಯೋಗಗಳು ಹೆಚ್ಚಿನ ಮಟ್ಟದಲ್ಲಿ ಈ ದೇಶದ ಹಿಂದುಳಿದ ಸಮುದಾಯಕ್ಕೆ ಸಿಗುತ್ತದೆಯೇ?
ಇವಲ್ಲದೆ ಈಗ ಹೆಚ್ಚುತ್ತಿರುವ ಟ್ರೆಂಡ್‌ಎಂದರೆ ಟೆರೇಸ್‌ ಕೃಷಿ ಹಾಗೂ ಕಿಚನ್‌ ಗಾರ್ಡನಿಂಗ್‌. ವಿಷಪೂರಿತ ಹಣ್ಣು ತರಕಾರಿಗಳನ್ನು ತಿಂದು ಸಾಕಾದ ಜನರು ತಮ್ಮ ಪಾಡಿಗೆ ಆರೋಗ್ಯಕರ ಆಹಾರವನ್ನು ಬೆಳೆದುಕೊಳ್ಳುವ ವಿಧ. ಮಾರುಕಟ್ಟೆಯಲ್ಲಿ ಕಾಣುವಂತೆ ಚಂದವಾಗಿ ಈ ತರಕಾರಿಗಳಿರದಿದ್ದರೂ ಅವುಗಳ ಆರೋಗ್ಯ ಲಾಭವನ್ನು ಮನಗಂಡು ಪಾಟ್‌ಗಳಲ್ಲಿಯೋ ಗೋಣಿಚೀಲಗಳಲ್ಲಿಯೋ ಬಸಳೆ, ಬೀನ್ಸ್‌, ಅಲಸಂಡೆ, ಹೆಚ್ಚೇಕೆ ಕಬ್ಬು, ದಾಳಿಂಬೆ ಇತ್ಯಾದಿಗಳನ್ನೂ ತಾರಸಿ ಮೇಲೆ ಬೆಳೆಯುತ್ತಿರುತ್ತಾರೆ. ಇದಲ್ಲದೆ ಸಮಾನ ಮನಸ್ಕರು ಒಂದಷ್ಟು ಜನ ಸೇರಿ ಹಳ್ಳಿಯಲ್ಲೊಂದಷ್ಟು ಜಾಗ ಪಡೆದು ತಮಗೆ ಬೇಕಾದ ಉತ್ಪನ್ನಗಳನ್ನು ತಾವೇ ಬೆಳೆದುಕೊಳ್ಳುತ್ತಿರುತ್ತಾರೆ. ಇವೆಲ್ಲವೂ ಆರೋಗ್ಯಕರ ಬೆಳವಣಿಗೆಗಳೇ.
ಟೋಲ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ವಿನಾಯಿತಿ ನೀಡಿ: ಲಕ್ಷ್ಮಣ ಸವದಿ
ನಿಮ್ಮ ಇನ್ವಾಯ್ಸ್ಗಳು ಮತ್ತು ಬಿಲ್ಗಳಿಗೆ ಟಿಪ್ಪಣಿಯನ್ನು ಸೇರಿಸಿ
ಮಧ್ಯಾಹ್ನ 12.30ರ ಸುಮಾರಿಗೆ ಗೆಳತಿಯೊಬ್ಬರಿಗೆ ಕರೆ ಮಾಡಿದ್ದ ನೇಹಾ, ‘ನಾನು ಪರಮ್ ಊಟಕ್ಕೆ ಹೋಟೆಲ್‌ಗೆ ಹೋಗುತ್ತಿದ್ದೇವೆ. ನಮ್ಮ ಜತೆ ನೀನೂ ಬಾ’ ಎಂದು ಬಲವಂತ ಮಾಡಿದ್ದರು. ಆದರೆ, ತನಗೆ ಬೇರೆ ಕೆಲಸ ಇರುವುದಾಗಿ ಗೆಳತಿ ಹೇಳಿದ್ದರು.
ಕಲಬುರಗಿ: ಗುಲಬರ್ಗಾ ವಿವಿಯಿಂದ ಬೇರ್ಪಟ್ಟು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿವಿ ನಡುವೆ ವಿವಿಯಲ್ಲಿ ಶೈಕ್ಷಣಿಕ ಅಭಿವೃದ್ಧಿ ಕುರಿತು ಸುದೀರ್ಘ‌ ಚರ್ಚೆ ನಡೆಯಿತು.
►ಮುಂದಿನ ಐದು ವರ್ಷಗಳಲ್ಲಿ ರೈತರಿಗೆ ಉತ್ತಮ ಆರ್ಥಿಕತೆಯನ್ನು ಖಾತ್ರಿಪಡಿಸಲು 10,000 ಹೊಸ ರೈತ ಉತ್ಪಾದನಾ ಸಂಘಗಳ ರಚನೆ.
ಶುಕ್ರವಾರ ನಡೆಯುವ ಪಂದ್ಯಗಳ ಲ್ಲಿ ಬ್ಲಿಟ್ಜ್‌–ಬೆಂಗಳೂರು ವಾರಿಯರ್ಸ್ (ಮ. 2ಕ್ಕೆ) ಮತ್ತು ಮಿಸಾಕ–ಬಿನ್ನಿ ಕ್ಲಬ್‌ (ಮ. 3.30ಕ್ಕೆ) ಪೈಪೋಟಿ ನಡೆಸಲಿವೆ.
ಈ "ಓರೆಯಾದ" ಸಣ್ಣ ಮಣಿಗಳಿಂದ ಮತ್ತು ದೊಡ್ಡ ಮಣಿಗಳಿಂದ ಕಂಕಣವನ್ನು ನೇಯಲಾಗುತ್ತದೆ. ಅಂತಹ ನೇಯ್ಗೆಯಲ್ಲಿ ಸಮಸ್ಯಾತ್ಮಕವಾದ ಏಕೈಕ ವಿಷಯವೆಂದರೆ ಅದೇ ಕಂಕಣದಲ್ಲಿ ವಿವಿಧ ಗಾತ್ರದ ಮಣಿಗಳ ಬಳಕೆ. ದೊಡ್ಡ ವೈವಿಧ್ಯಮಯ ಮಣಿಗಳನ್ನು ನೇಯ್ಗೆ ಮಾಡುವ ಸರಳ ಸಂದರ್ಭಗಳಲ್ಲಿ ಕೆಲಸವನ್ನು ಮಾತ್ರ ಅಲಂಕರಿಸಿದರೆ, ನಂತರ ಕಂಕಣ-ಬ್ರೇಡ್ಗೆ ಅಂತಹ ಮಣಿಗಳನ್ನು ಸೇರಿಸುವುದು ಹೆಚ್ಚಿನ ಉತ್ಪನ್ನವನ್ನು ವಿರೂಪಗೊಳಿಸುತ್ತದೆ.
ಭಾರತ ತಂಡ ಈ ಗೆಲುವಿನೊಂದಿಗೆ ಪ್ರಸಕ್ತ ಚಾಲ್ತಿಯಲ್ಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು ಒಟ್ಟು 360 ಅಂಕಗಳನ್ನು ಗಳಿಸಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್‌ ಸರಣಿ ಮೂಲಕ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನ ಆರಂಭಿಸಿದ ಭಾರತ, ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 3-0 ಅಂತರದಲ್ಲಿ ವೈಟ್‌ವಾಷ್‌ ಮಾಡಿತ್ತು.
ಆಯಾ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಆನ್ ಲೈನ್ ಮೂಲಕ ನೋಂದಾಯಿಸಿ ಮೇಳದಲ್ಲಿ ಪಾಲ್ಗೊಳ್ಳಬಹುದು. ಕೃಷಿ ವಿಜ್ಞಾನಿಗಳ ಜತೆ ದ್ವಿಮುಖ ಸಂಹವನದ ವ್ಯವಸ್ಥೆ ಇದೆ. ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆ ಹಂಚಿಕೊಂಡು ಪರಿಹಾರ ಪಡೆಯಬಹುದಾಗಿದೆ. ದೇಶದ ನಾನಾ ಭಾಗಗಳ ಕನಿಷ್ಠ 25 ಲಕ್ಷ ರೈತರಿಗೆ ತಂತ್ರಜ್ಞಾನಗಳನ್ನು ಪೂರೈಸುವ ಕಾರ್ಯದಲ್ಲಿ ಸಂಸ್ಥೆ ಈಗಾಗಲೆ ತೊಡಗಿಸಿಕೊಂಡಿದೆ. ಈ ಭಾರಿಯ ಮೇಳದಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಲಾಗುವುದು ಎಂದು ವಿವರಿಸಿದ್ದಾರೆ.
ಬೆಂಗಳೂರು: ಖಾಸಗಿ ಟಿ.ವಿ ವಾಹಿನಿಗಳು ಪ್ರಸಾರ ಮಾಡುವ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿಎರಡು ತಿಂಗಳಲ್ಲಿರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿಮೇಲ್ವಿಚಾರಣಾ ಸಮಿತಿಗಳನ್ನು ರಚನೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
ಮಹಿಳೆ ಹಾಗೂ ಮಕ್ಕಳ ರಕ್ಷಣೆಗಾಗಿ ಹಲವು ಕಾನೂನು ಜಾರಿಯಲ್ಲಿದ್ದರೂ, ಅವರ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ನಡೆಯುತ್ತಿದೆ. ಇಂತಹ ಘಟನೆಗಳು ಸಮಾಜದ ಶಾಂತಿಯನ್ನು ಕದಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲಿಯೂ ಸಾಮಾನ್ಯರನ್ನು ಪ್ರಶ್ನಿಸಿದ. ಅವರಲ್ಲಿ ಒಬ್ಬರೂ ರಾಜನ ಒಂದು ದುರ್ಗುಣವನ್ನೂ ಹೇಳಲಿಲ್ಲ. ಬದಲಾಗಿ ಅವನನ್ನು ದೇವರೆಂದೇ ಭಾವಿಸುವು-ದಾಗಿ ಹೇಳಿದರು. ಬ್ರಹ್ಮದತ್ತ ಅಂದಿನ ಕಾಲದ ಮಹಾಜ್ಞಾನಿ ಎಂದು ಹೆಸರಾದ ವಿಷ್ಣುಗೋಪನನ್ನು ಕಂಡು ತನ್ನಲ್ಲಿ ಯಾವುದಾದರೂ ದೋಷವಿದ್ದರೆ ತಿಳಿಸಿ ಅದನ್ನು ಕಳೆದುಕೊಳ್ಳುವ ವಿಧಾನ­ವನ್ನು ಹೇಳಲು ಕೇಳಿಕೊಂಡ. ಇದೇ ರೀತಿಯ ಪರಿಸ್ಥಿತಿ ಕೋಸಲ ದೇಶದ ರಾಜನಾದ ಮಲಿಕಸಿಂಹನಿಗೂ ಬಂದಿತ್ತು. ಅವನನ್ನು ಜನ ದೇವರೆಂದೇ ನಂಬುತ್ತಿದ್ದರು. ಅವನ ರಾಜ್ಯದಲ್ಲೂ ಒಂದೇ ಒಂದು ಕಳವು, ಅನ್ಯಾಯದ ಪ್ರಸಂಗ­­ಗಳು ನಡೆಯುತ್ತಿರಲಿಲ್ಲ. ಅವನೂ ಕೂಡ ವಿಷ್ಣುಗೋಪನನ್ನು ಕಂಡು ತನ್ನ ದುರ್ಗುಣಗಳನ್ನು ಕಂಡು ಹಿಡಿಯಲು ಬೇಡಿಕೊಂಡಿದ್ದ. ವಿಷ್ಣು­ಗೋಪ ಇಬ್ಬರೂ ರಾಜರ ವಿವರಗಳನ್ನೆಲ್ಲ ತರಿಸಿಕೊಂಡ. ಆಶ್ಚರ್ಯವೆಂದರೆ ಇಬ್ಬರೂ ಒಂದೇ ವಯಸ್ಸಿನವರು. ಅವರ ರಾಜ್ಯದ ವಿಸ್ತಾರ, ಐಶ್ವರ್ಯ, ಸೈನ್ಯದ ಶಕ್ತಿ, ಅವರು ಪಡೆದ ಯಶಸ್ಸು ಎಲ್ಲವೂ ಸಮನಾಗಿಯೇ ಇದ್ದವು. ಎರಡೂ ದೇಶದ ಜನರು ತಮ್ಮ ತಮ್ಮ ರಾಜನಲ್ಲಿ ಒಂದೇ ಒಂದು ತಪ್ಪನ್ನು ಕಂಡುಹಿಡಿ­ಯಲು ಅಸಮರ್ಥ­ರಾಗಿದ್ದರು. ಇಬ್ಬ­ರಲ್ಲಿ ಯಾರು ಹೆಚ್ಚು ಒಳ್ಳೆಯವರು ಎಂಬು­ದನ್ನು ಗುರುತಿಸುವುದು ಹೇಗೆ ಎಂಬುದು ವಿಷ್ಣುಗೋಪನಿಗೆ ಸವಾಲಾ­ಯಿತು.
ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡವು 8 ವಿಕೆಟಿಗೆ 321 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಮತ್ತೆ ಆರಂಭಿಕ ಕುಸಿತ ಕಂಡರೂ ಕೊಹ್ಲಿ, ಯುವರಾಜ್‌, ಕೇದಾರ್‌ ಜಾಧವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಉಪಯುಕ್ತ ಆಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದ ಭಾರತ ಅಂತಿಮ ಓವರಿನಲ್ಲಿ ಕುಸಿತ ಕಂಡು 9 ವಿಕೆಟಿಗೆ 316 ರನ್‌ ಗಳಿಸಲಷ್ಟೇ ಶಕ್ತವಾಯಿತು.
2021ರ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಖುಷ್ಬೂ ಅವರಿಗೆ ಪ್ರಮುಖ ಜವಾಬ್ದಾರಿ ನೀಡುವ ನಿರೀಕ್ಷೆಯಿದೆ. ರಾಜ್ಯಸಭಾ ಸ್ಥಾನ ನೀಡುವ ಬಗ್ಗೆ ವದಂತಿಗಳಿವೆ. “ಖುಷ್ಬೂ ತಮಿಳುನಾಡಿನಲ್ಲಿ ಬಿಜೆಪಿ ಬಗ್ಗೆಯ ಗ್ರಹಿಕೆಯನ್ನು ಬದಲಿಸುತ್ತಾರೆ” ಎಂದು ಬಿಜೆಪಿಯ ತಮಿಳುನಾಡು ಘಟಕ ಹೇಳಿದೆ. ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇದೆ.
ಜು.19ರಂದು ಮಧ್ಯಾಹ್ನ 3 ಗಂಟೆವರೆಗೆ ಮನೆಮಂದಿಯ ಸಂಪರ್ಕದಲ್ಲಿದ್ದ ಹೆಜೆಲ್, 3.15ರ ನಂತರ ಸಂಪರ್ಕಕ್ಕೆ ಸಿಗಲಿಲ್ಲ. 48 ಗಂಟೆ ಬಳಿಕ ಆಕೆಯ ಹಾಸ್ಟೆಲ್ ರೂಂ ಮೇಟ್ ‘ಹೆಜೆಲ್ ಸತ್ತಿದ್ದಾಳೆ’ ಎಂಬ ಮಾಹಿತಿ ನೀಡಿದರು. ಮನೆಮಂದಿಗೆ ಆಸ್ಪತ್ರೆಯಿಂದ ಸಾವಿನ ಅಧಿಕೃತ ಮಾಹಿತಿ ಸಿಕ್ಕಿದ್ದು 22ರಂದು. ಆದರೆ, ಹೇಗೆ ಸಾವಿಗೆ ಏನು ಕಾರಣ ಎಂಬುದನ್ನು ಆಸ್ಪತ್ರೆ ಮೂಲಗಳು ತಿಳಿಸಿಲ್ಲ. ಸಾಯುವ ಮುನ್ನ ಹೆಜೆಲ್ ಪತ್ರ ಬರೆದಿದ್ದರು ಎಂದು ಹೇಳಲಾಗಿದ್ದು, ಅದರಲ್ಲಿ ಕಿರುಕುಳದ ಪ್ರಸ್ತಾಪವಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ಜಿಲ್ಲಾಧಿಕಾರಿ ಎನ್‌. ಜಯರಾಂ ಅಧ್ಯಕ್ಷತೆಯಲ್ಲಿ ಬೇಸ್‌ ಮೆಂಟ್‌ ತೆರವು ಕಾರ್ಯಾಚರಣೆ ಕುರಿತು ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ನರೇಂದ್ರ ಮೋದಿಯವರ ಸರ್ಕಾರ ಆರಂಭದಲ್ಲಿ ಧರ್ಮರಾಯನಂತೆ ಇತ್ತು. ಈಗ ದುರ್ಯೋದನನ ಸರ್ಕಾರವಾಗಿದೆ ಎಂದು ಹಂಪನಾ ಅವರು ಹೇಳಿದ್ದಾರೆ. ಇದರಲ್ಲಿ ಮಾನಹಾನಿಯಾಗುವ ಅಂಶ ಏನಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇದೆ. ಯಾರೂ ಅದನ್ನು ನಿಯಂತ್ರಿಸಲು ಆಗದು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಟಿ.ರಘುಮೂರ್ತಿಯವರು ಎರಡನೇ ಅವಧಿಯ ಒಂದು ವರ್ಷವನ್ನು ಪೂರೈಸಿದ್ದು, ಒಂದು ವರ್ಷದಲ್ಲೇ ಅವರು, ರಾಜಕೀಯ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿ ಬೆಳೆದಿದ್ಧಾರೆ. ಎರಡನೇ ಅವಧಿಯ ಶಾಸಕರಾಗಿ ಆಯ್ಕೆಯಾದ ಅವರು, ಒಂದು ವರ್ಷ ಪೂರ್ಣಗೊಳಿಸಿದ್ದು, ಹಲವಾರು ಸವಾಲುಗಳನ್ನು ಎದುರಿಸಿ ರಾಜಕೀಯ ಕ್ಷೇತ್ರದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿದ್ಧಾರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎನ್.ರವಿಕುಮಾರ್ ತಿಳಿಸಿದ್ಧಾರೆ.
ಇದು ದೌರ್ಬಲ್ಯ, pereutomlyaemosti, ಅರೆನಿದ್ರಾವಸ್ಥೆ ಅವಧಿಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ ಒಂದು ನಾದದ. ತಜ್ಞರು ಶರತ್ಕಾಲದಲ್ಲಿ, ಖಿನ್ನತೆ ಆಗಾಗ್ಗೆ ಸ್ಪರ್ಧೆಗಳಲ್ಲಿ ಮಾಡಿದಾಗ ಶಿಫಾರಸು ವಿಟಮಿನ್ ಸಂಕೀರ್ಣ ಬದಲಿಗೆ ಟಿಂಚರ್. ಆ ರೀತಿಯಲ್ಲಿ ನೀವು ಕೆಲಸದ ಸಮಯದಲ್ಲಿ ಆಯಾಸ ಕಾಡುವ ಭಾವನೆಗಳನ್ನು ತೊಡೆದುಹಾಕಲು ತುರ್ತು ಸಂದರ್ಭಗಳಲ್ಲಿ ಪರಿಹರಿಸುವ ಗಮನ ಹೆಚ್ಚು ಸುಲಭವಾಗಿರುತ್ತದೆ. ಇದು ಇಂತಹ ಸಾಮಾನ್ಯ ಪವಾಡ ಇನ್ನಿತರ ಬಳಿಯಿರುವ ಎಂದು ನಂಬಲಾಗಿದೆ ಇದೆ. ಎಲ್ಲಾ ಇತರ ಭರವಸೆಗಳಿಗೆ ಬಳಕೆಗೆ ಸೂಚನೆಗಳು ಲೈಂಗಿಕ ಜೀವನದ ಸಮಸ್ಯೆಗಳನ್ನು ತೊಡೆದುಹಾಕಲು - ಹೆಚ್ಚು ತೀವ್ರ ಆಗಲು ಆಸೆ, ಮತ್ತು ಹೆಚ್ಚು ಅವಕಾಶಗಳನ್ನು ಇರುತ್ತದೆ. ಟಿಂಚರ್ ಪ್ರಮುಖ ಕಾರ್ಯಾಚರಣೆಗೆ ಅಥವಾ ಗಂಭೀರ ಅನಾರೋಗ್ಯದ ವರ್ಗಾವಣೆಯ ನಂತರ ಚೇತರಿಕೆ ಅವಧಿಯಲ್ಲಿ ಒಂದು ಅನಿವಾರ್ಯ ವಿಷಯ ಪರಿಗಣಿಸಲಾಗಿದೆ. ಕೆಲವು ರೋಗಿಗಳು ಭಾವನಾತ್ಮಕವಾಗಿ ಕಷ್ಟ ಸಂದರ್ಭಗಳಲ್ಲಿ ಸರಿಸಲು ಸಹಾಯ, ನೈಸರ್ಗಿಕ ಖಿನ್ನತೆ-ಶಮನಕಾರಿಯಾಗಿ ತೆಗೆದುಕೊಂಡು. ನಾವು ನಿರೋಧಕ ಕ್ರಮಗಳು ಬಗ್ಗೆ ಮಾತನಾಡಲು ವೇಳೆ, ಇನ್ನಿತರ ದೇಹದ ಮೇಲೆ ಆಕ್ರಮಣಕಾರಿ ಅಂಶಗಳು ಋಣಾತ್ಮಕ ಪರಿಣಾಮ ಬೆದರಿಕೆ ಕಡಿಮೆಯಾಗುವ ಕೋಟೆಯನ್ನು ನಿರೋಧಕ ರಕ್ಷಣೆಗಾಗಿ ಬೆಂಬಲಿಸುವ ಅತ್ಯುತ್ತಮ ಮಾಧ್ಯಮವಾಗಿದೆ ಕರೆಯಬಹುದು. ಮಹಿಳೆಯರು ಗಮನಾರ್ಹ ಪ್ರಯೋಜನವನ್ನು ಸಸ್ಯ ಒಳಗೊಂಡಿರುವ ಕಿಣ್ವಗಳು, ಪರಿಣಾಮವಾಗಿ, ಚಯಾಪಚಯ ವೇಗವನ್ನು, ಮತ್ತು ನೈಸರ್ಗಿಕ ತೂಕ ನಷ್ಟ ಸತ್ಯ.
ರಾಜ್ಯದ ಕೃಷಿ ವಲಯ ಅತ್ಯಂತ ಬಿಕ್ಕಟ್ಟಿನಲ್ಲಿ ಇದ್ದು, ಸತತ ಬರಗಾಲ ಮತ್ತು ಹವಮಾನ ವೈಪರೀತ್ಯದಿಂದ ರಾಜ್ಯದ ಹಲವೆಡೆ ಅತಿವೃಷ್ಠಿ ಕಂಡುಬಂದಿದೆ. ಕೈಗೆ ಸಿಕ್ಕ ಅಲ್ಪ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಕಂಗಲಾಗಿದ್ದಾನೆ. ಇದಕ್ಕೆ ವೈಜ್ಞಾನಿಕ ಪರಿಹಾರ ನೀಡವಬೇಕು. ಎಲ್ಲಾ ಬ್ಯಾಂಕುಗಳು ಬರಗಾಲದ ನೆಪದಲ್ಲಿ ತಮ್ಮ ಕೃಷಿ ಸಾಲಗಳನ್ನು ಎನ್.ಪಿ.ಎ. ಮಾನದಂಡದಿಂದ ಹೊರಗಿಡುವ ಸಲುವಾಗಿಯೇ ಪರಿವರ್ತಿಸಿಕೊಳ್ಳಲಾಗಿದೆ ಹೊರತು ರೈತರ ಅನುಕೂಲಕ್ಕಾಗಿ ಅಲ್ಲ. ತಕ್ಷಣ ಈ ಪದ್ಧತಿಯನ್ನು ಬದಲಾಯಿಸಬೇಕು ಎಂದು ಹೇಳಿದರು.
ಜಾತ್ರಾ ಪ್ರಯುಕ್ತ ಮಾ.೮ರಂದು ನೂಜಿಬೈಲು, ಪೆರ್ನಾಜೆ, ಸಾಂತ್ಯ, ನೆಲ್ಲಿತ್ತಡ್ಕ, ಮುಂಡ್ಯ, ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾಯಿ, ಮಯ್ಯಾಳ,, ಪಂಚೋಡಿ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತಡ್ಕದಿಂದ ಸಂಜೆ ೪ ಗಂಟೆಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ.
ನಗರದ ಸರಕಾರಿ ಕಲಾ ಕಾಲೇಜು ಹಿಂಭಾಗದಲ್ಲಿನ ಯಂಗಮ್ಮಕಟ್ಟೆ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಅಂಬೇಡ್ಕರ್‌ ಮಹಾ ಪರಿ ನಿರ್ವಾಣದ ಪರಿವರ್ತನಾ ದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮೌಢ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುದ್ಧ ಮಾನವೀಯತೆ, ಬಸವಣ್ಣ ಸಮಾನತೆ ಹಾಗೂ ಅಂಬೇಡ್ಕರ್‌ ವೈಚಾರಿಕತೆ ಬೋಧಿಸಿದರು. ಅಂಬೇಡ್ಕರ್‌ ಸಹಿತ ಎಲ್ಲದಾರ್ಶನಿಕರ ಆದರ್ಶಗಳು ವೈಚಾರಿಕತೆಯ ರೂಢಿಗೆ ಸಹಕಾರಿಯಾಗಿವೆ. ಧರ್ಮದಲ್ಲಿ ಸಂಪ್ರದಾಯಗಳು ಸಹಜ, ಆದರೆ, ಗೊಡ್ಡು ಸಂಪ್ರದಾಯಗಳೇ ಧರ್ಮ ಆಗಬಾರದು. ಬದುಕಿಗೆ ನಂಬಿಕೆ ಬೇಕು, ಮೂಢನಂಬಿಕೆ ಅಲ್ಲ. ಕಂದಾಚಾರಗಳ ಆಚರಣೆ ಬೇಡ ಎಂದು ಸಲಹೆ ನೀಡಿದರು.
* ಅಸ್ಸಾಂ ಕಾಂಗ್ರೆಸ್: 3 ಲಕ್ಷ ರೂಪಾಯಿ
ನೆರೆ, ಅತಿವೃಷ್ಟಿ ಬಾರದೆ ಇದ್ದರೆ ಈ ಹಬ್ಬಕ್ಕೆ ಹಣ್ಣು, ಹೂವು, ಬಾಳೆ ಬೃಹತ್‌ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿತ್ತು. ಮಣ್ಣಿನ ಹಣತೆಯಂತೂ ಭರಪೂರಾಗಿ ಮಾರಾಟವಾಗುತ್ತಿತ್ತು. ಆದರೆ, ಈ ಬಾರಿ ಮಹಾಮಳೆ ಸೃಷ್ಟಿಸಿದ ಅವಾಂತರದಿಂದಾಗಿ ಕುಂಬಾರರ ಬದುಕು ಬೀದಿಗೆ ಬಂದಂತಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ತಯಾರಿಸಿದ್ದ ಹಣತೆಗಳು, ಕುಂಬಾರರ ಭಟ್ಟಿ, ಹಣತೆ ತಯಾರಿಸುವ ಮಣ್ಣು ಎಲ್ಲವೂ ನೀರುಪಾಲಾಗಿವೆ. ಹೀಗಾಗಿ ಹಬ್ಬದಲ್ಲಿ ಎಲ್ಲರ ಮನೆ ಬೆಳಗುತ್ತಿದ್ದ ಕುಂಬಾರರ ಹಣತೆ ಮಣ್ಣು ಸೇರಿವೆ. ಈ ಜಾಗದಲ್ಲಿ ಪಿಂಗಾಣಿ ಹಣತೆಗಳು ಬಂದಿದ್ದು ಜನರು ಅನಿವಾರ್ಯವಾಗಿ ಅವುಗಳನ್ನೇ ಖರೀದಿಸುತ್ತಿದ್ದಾರೆ.
ಯಕೃತ್ತಿನ ಕಾಯಿಲೆಗಳು (ಹೆಪಟೈಟಿಸ್, ಕೊಬ್ಬಿನ ಅವನತಿ, ಸಿರೋಸಿಸ್);
ಯಾವಾಗಲೂ, ಮಗುವಿನ ತಲೆ ಹಾನಿಗೊಳಗಾಗುತ್ತದೆ ಎಂದು ದೂರು ಮಾಡಿದಾಗ, ಒಬ್ಬನು ತನ್ನ ಪದಗಳನ್ನು ಉನ್ನತ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಬೇಕು. ಮಗುವಿಗೆ ಏಕೆ ತಲೆನೋವು ಇದೆ ಎಂದು ಕಂಡುಹಿಡಿಯುವುದು ನಿಮ್ಮ ಮುಖ್ಯ ಕಾರ್ಯ. ದೂರುಗಳು ಪುನರಾವರ್ತಿತವಾಗಿದ್ದರೆ, ನೀವು ನಿರ್ಣಾಯಕವಾಗಿ ಕೆಲಸ ಮಾಡಬೇಕಾಗುತ್ತದೆ.
ಯುವಕರ ನಡುವೆ ವಾಗ್ವಾದ: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ವ್ಯಕ್ತಿ ಕೊಲೆ
ಮೈಕ್ರೋ ಕಂಟೈನ್ಮೆಂಟ್‌ಗಳ ಮೇಲೆ ಗಮನವಿಡಿ
ಈ ಎರಡು ಪ್ರಶ್ನೆಗಳಿಗೆ ಅವರು "ಹೌದು" ಎಂದು ಉತ್ತರಿಸಿದರೆ, ಕಾರ್ಪಲ್ ಸುರಂಗ ಸಿಂಡ್ರೋಮ್ ಹೊಂದಲು ಈ ಅಧ್ಯಯನದಲ್ಲಿ ಪಾಲ್ಗೊಳ್ಳುವವರು ಪರಿಗಣಿಸಿದ್ದಾರೆ:
ಪಾಟ್ನಾ: ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ನಂತರ, ಆಕೆಯನ್ನ ವಿದ್ಯುತ್​ ಕಂಬಕ್ಕೆ ನೇತು ಹಾಕಿರುವ ಪ್ರಕರಣ ನಡೆದಿದೆ.
ಆಗ ಮಕ್ಕಳ ಮುಖ್ಯ ಕೆಲಸ ಎಂದರೆ ತಯಾರಾಗುವುದು – ದೇಹವನ್ನು ಯೋಗ್ಯವಾಗಿ, ಆರೋಗ್ಯಕರವಾಗಿ ಬೆಳೆಸುವುದು, ಮೆದುಳು ಮತ್ತು ಬುದ್ಧಿಗೆ ಒಳ್ಳೊಳ್ಳೆಯ ವಿಚಾರಗಳನ್ನು, ಆಲೋಚನೆಗಳನ್ನು ಉಣಿಸುವುದು, ಸುತ್ತಮುತ್ತಲ ಸಂಗತಿಗಳನ್ನು ನಿಜಾರ್ಥದಲ್ಲಿ ಅರ್ಥ ಮಾಡಿಕೊಳ್ಳುವ ಶಕ್ತಿಗಳನ್ನು ಹರಿತಗೊಳಿಸಿಕೊಳ್ಳುವುದು, ಕೌಶಲಗಳನ್ನು ಸಿದ್ಧಿಸಿಕೊಳ್ಳುವುದು. ಭವಿಷ್ಯದಲ್ಲಿ ನಮ್ಮೆದುರಿಗೆ ಏನು ಒದಗಲಿದೆ ಎಂಬುದು ನಮಗೆ ಗೊತ್ತಿಲ್ಲ. ಯಾವುದೂ ಒದಗಬೇಕಾಗಿಯೂ ಇಲ್ಲ. ಈಗಿನ ನಮ್ಮ ತಯಾರಿ ಚೆನ್ನಾಗಿ ಆದರೆ ಇದುವರೆಗೆ ಯಾರಿಗೂ ಸಾಧ್ಯವಾಗದ ವಿಶಿಷ್ಟ ಭವಿಷ್ಯವನ್ನು ಸಾಧ್ಯ ಮಾಡಿಕೊಳ್ಳಬಹುದು.
ದಿನದ ಕೊನೆಯ ಪಂದ್ಯದಲ್ಲಿ ಐತಿಚಂಡ ತಂಡವು ಅಪ್ಪಚ್ಚೀರ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಐತಿಚಂಡ ಪರ ಪೂವಯ್ಯ 2 ಗೋಲು ಬಾರಿಸಿ ಮಿಂಚಿದರು.
ತನ್ನ ಸೌಂದರ್ಯ, ಅಭಿನಯದಿಂದ ದಕ್ಷಿಣ ಭಾರತದ ಭಾಷೆಗಳಲ್ಲಿ ಒಳ್ಳೆಯ ಹೆಸರು ಗಳಿಸಿರುವ ಈ ತಾರೆ ಇತ್ತೀಚೆಗೆ ಕನ್ನಡದಲ್ಲಿ ರಣವಿಕ್ರಮ ಮತ್ತು ಸನ್ ಆಫ್ ಸತ್ಯ ಮೂರ್ತಿ ಎನ್ನುವ ಹೆಸರಿನ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದರು. ಪ್ರಸ್ತುತ ಕ್ಷಣಂ ಮತ್ತು ಗರಂ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಈ ತಾರೆಗೆ ಶೂಟಿಂಗ್ ಸಮಯದಲ್ಲಿ ಒಂದು ಬಸ್ ಡಿಕ್ಕಿ ಹೊಡೆದು ಆಕೆಗೆ ಗಾಯಗಳಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಸುದ್ದಿಯು ಹರಡಿತ್ತು.
ಹಸಿರು ಈರುಳ್ಳಿ ಜಾಲಾಡುವಿಕೆಯ, ಅಲುಗಾಡಿಸಿ ಮತ್ತು ನುಣ್ಣಗೆ, ಒಂದು ಚಾಕುವಿನಿಂದ ನುಣ್ಣಗೆ ಕತ್ತರಿಸಿ.
ಐಸಿಸ್ ವಿರುದ್ಧ ಭಾರತೀಯ ಇಮಾಮ್‌ಗಳ ಫತ್ವಾ
ಸನಾತನಿ ಸಂಪ್ರದಾಯವನ್ನು ನಂಬುವವರು, ಹೊಸ ವರ್ಷ ಅಂದರೆ ಹೊಸ ವರ್ಷವು ಚೈತ್ರ ನವರಾತ್ರಿಗಳೊಂದಿಗೆ ಪ್ರಾರಂಭವಾಗಲಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಇದನ್ನು 'ಯುಗಾದಿ', ನೂತನ ಸಂವತ್ಸರ ಎಂದು ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ನವರಾತ್ರಿಯ 9 ದಿನಗಳಲ್ಲಿ ಮಾತೆ ದುರ್ಗಾ ದೇವಿಯ ಭಕ್ತರು ವಿಶೇಷ ಪೂಜೆಗಳು ಮತ್ತು ಉಪವಾಸಗಳನ್ನು ಮಾಡುತ್ತಾರೆ. ಇದಲ್ಲದೆ ಐಪಿಎಲ್ ( IPL ) ಅನ್ನು ಏಪ್ರಿಲ್ನಲ್ಲಿ ಪ್ರಾರಂಭಿಸಬಹುದು. ಅದೇ ಸಮಯದಲ್ಲಿ ಚುನಾವಣಾ ಆಯೋಗವು ಐದು ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಪ್ರಕಟಿಸುತ್ತದೆ.
ಬಹುತೇಕ ಹೂಗಳು ತಮ್ಮ ಮೂಲ ಲ್ಯಾಟಿನ್ ಹೆಸರಿನಿಂದ ಜನಪ್ರಿಯವಾಗಿಲ್ಲ. ಇದಕ್ಕೆ ಅಪವಾದ ಜಮೈಕಾದ ರಾಷ್ಟ್ರೀಯ ಸಂಕೇತ ಎನಿಸಿರುವ ‘ಲಿಗ್ನಮ್ ವಿಟೆ’. ‘ಜೀವಮರ’ ಎಂಬ ಅರ್ಥ ಕೊಡುವ ಹೆಸರಿದು. ಈ ಮರಗಳು ಹೆಸರಿಗೆ ತಕ್ಕಂತೆ ಜೀವಂತಿಕೆಯಿಂದ ಮೈದುಂಬಿಕೊಳ್ಳುತ್ತವೆ.
ಹಣಕಾಸಿನ ಸ್ಥಿತಿ ಕೊಂಚ ನೆಮ್ಮದಿ. ಸಂಬಂಧಿಕರು ಸಾಲಕ್ಕಾಗಿ ಬರಬಹುದು. ಮೂಳೆ ತೊಂದರೆ ಇರುವವರು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಬಂಧುಗಳ ಮನೆಗೆ ಹೋದಾಗ ಅನಿರೀಕ್ಷಿತ ಪ್ರೇಮದಲ್ಲಿ ಸಿಲುಕುವ ಸಾಧ್ಯತೆ. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ. ಕೃಷಿ ಉಪಕರಣಗಳ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ವಾರಾಂತ್ಯಕ್ಕೆ ಧಾರ್ಮಿಕ ಪ್ರವಾಸ. ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಉದ್ಯಮ ಪ್ರಾರಂಭದ ಚಿಂತನೆ. ಸಂಗಾತಿಯು ನಿಮ್ಮಿಂದ ದೂರ ಏಕೆ? ಎಂಬ ಪ್ರಶ್ನೆ ಕಾಡಲಿದೆ. ಮಿತ್ರವರ್ಗದಿಂದ ಉದ್ಯೋಗಕ್ಕೆ ದಾರಿದೀಪ.